¡Sorpréndeme!

ಕರ್ನಾಟಕ ಬಂದ್ : ಎಚ್ ಡಿ ಕುಮಾರಸ್ವಾಮಿ ಎಚ್ ಡಿ ದೇವೇಗೌಡ ಫುಲ್ ಗರಂ | Oneindia Kannada

2018-01-25 1 Dailymotion

ಕಳೆದ ಕೆಲವು ತಿಂಗಳುಗಳಿಂದ ಕನ್ನಡಪರ ಮತ್ತು ರೈತ ಸಂಘಟನೆಗಳು ಕರೆದ ಕರ್ನಾಟಕ ಮತ್ತು ಬೆಂಗಳೂರು ಬಂದ್ ಎಷ್ಟು? ಬಂದ್ ಕರೆನೀಡಿರುವುದರ ಹಿಂದಿನ ಉದ್ದೇಶ ಯಶಸ್ವಿಯಾಯಿತೇ? ಬಂದ್ ನಿಂದಾಗಿ ದೈನಂದಿನ ದುಡಿಮೆಯಿಂದ ಬದುಕುತ್ತಿರುವವರ ಪಾಡೇನು?

ನಲವತ್ತು ವರ್ಷದ ಹಿಂದಿನ ಸಮಸ್ಯೆ, ಎಷ್ಟು ಪ್ರಧಾನಿಗಳು ಬಂದು ಹೋದರು, ಎಷ್ಟು ಸಿಎಂ ಬಂದು ಹೋದ್ರೂ.. ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಪರಿಹಾರ ಆಗಬೇಕು ಎನ್ನುವ ಇಚ್ಚಾಶಕ್ತಿ ರಾಜಕೀಯ ನಾಯಕರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ.

ಗುರುವಾರ (ಜನವರಿ 25) ಕನ್ನಡಪರ ಸಂಘಟನೆಗಳು ಕರೆನೀಡಿರುವ 'ಕರ್ನಾಟಕ ಬಂದ್' ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ, ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಒಂದೇ ಮಾತಿನಲ್ಲಿ ಕನ್ನಡ ಹೋರಾಟಗಾರರಿಗೆ ಸರಿಯಾಗಿ ಚಾಟಿ ಬೀಸಿದ್ದಾರೆ.

ಇನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರು ಕೂಡಾ, ಬಂದ್ ಕರೆನೀಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಂದ್ ನಿಂದಾಗಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎನ್ನುವ ಮಾತನ್ನು ಗೌಡ್ರು ಹೇಳಿದ್ದಾರೆ.